Vaibhav Suryavanshi: ಸಂಜು ಟೀಂ ವಿರುದ್ಧವೇ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ವೈಭವ್ ಸೂರ್ಯವಂಶಿ | Vaibhav Suryavanshi Hits 15-Ball Fifty for Rajasthan Royals Against Chennai Super Kings in IPL 2026

Sports

oi-Madhusudhan KR

Vaibhav Suryavanshi: ಗುವಾಹಟಿಯಲ್ಲಿ ಸೋಮವಾರ ನಡೆದ ಐಪಿಎಲ್‌ 2026ರ 3ನೇ ಪಂದ್ಯದಲ್ಲಿ ರಾಜಸಸ್ಥಾನ್ ರಾಯಲ್ಸ್‌ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಆರ್‌ ತಂಡ ಸಿಎಸ್‌ಕೆ ನೀಡಿದ್ದ 128 ರನ್‌ಗಳ ಗುರಿಯನ್ನು ಕೇವಲ 12.1 ಓವರ್‌ಗಳಲ್ಲಿ ತಲುಪಿತು.

ವೈಭವ್ ಸೂರ್ಯವಂಶಿ ಕೇವಲ 17 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 52 ರನ್ ಸಿಡಿಸಿ ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಇವರು ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ದಾಖಲೆ ಬರೆದರು. ಆರಂಭಿಕ ಆಟಗಾರ ಜೈಸ್ವಾಲ್ 36 ಎಸೆತಗಳಲ್ಲಿ ಅಜೇಯ 38* ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Vaibhav Suryavanshi Hits 15-Ball Fifty for Rajasthan Royals Against Chennai Super Kings in IPL 2026

ಸಿಎಸ್‌ಕೆ ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ಬೌಲರ್‌ಗಳ ಮಾರಕ ದಾಳಿಯಿಂದ 19.4 ಓವರ್‌ಗಳಲ್ಲಿ 127 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಆಲೌಟ್ ಆಯಿತು. ರಾಜಸ್ಥಾನ್ ಪರ ನಾಂದ್ರೆ ಬರ್ಗರ್ 2 ವಿಕೆಟ್ (ಸಂಜು ಸ್ಯಾಮ್ಸನ್ ಸೇರಿದಂತೆ) ಪಡೆದರೆ, ಜೋಫ್ರಾ ಆರ್ಚರ್ ನಾಯಕ ರುತುರಾಜ್ ಗಾಯಕವಾಡ್ ಅವರ ವಿಕೆಟ್ ಪಡೆದರು. ಬ್ರಿಜೇಶ್ ಶರ್ಮಾ ತಮ್ಮ ಚೊಚ್ಚಲ ವಿಕೆಟ್ ಪಡೆದು ಗಮನ ಸೆಳೆದರು.

ಆರ್‌ಆರ್ ಬೌಲಿಂಗ್‌ ದಾಳಿಗೆ ಸಿಎಸ್‌ಕೆ ತತ್ತರ

ರಾಜಸ್ಥಾನ್ ರಾಯಲ್ಸ್ ಪರ ರಿಯಾನ್ ಪರಾಗ್ ಮೊದಲ ಬಾರಿಗೆ ನಾಯಕನಾಗಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರು. ಇದೇ ಇವರಿಗೆ ಪ್ಲಸ್ ಪಾಂಯಿಂಟ್ ಆಯಿತೆಂದರೆ ತಪ್ಪಾಗಲಾರದು. ಆರ್‌ಆರ್ ತಂಡದ ಬೌಲರ್‌ಗಳು ಮಾರಕ ಬೌಲಿಂಗ್ ದಾಳಿ ಮಾಡುವ ಮೂಲಕ ಸಿಎಸ್‌ಕೆ ಬ್ಯಾಟರ್‌ಗಳನ್ನು ಕಟ್ಟಿಹಾಕುವುದಲ್ಲದೆ, ಕೊನೆಗೆ 20 ಓವರ್‌ವೊಳಗೆ ಆಲ್‌ಔಟ್‌ ಮಾಡಿ ಗಮನ ಸೆಳೆದರು.

ಮಿಂಚಿದ ಆರ್‌ಆರ್ ಬೌಲರ್‌ಗಳು

ಆರ್‌ಆರ್ ಪರ ವೇಗಿಗಳಾದ ನಾಂದ್ರೆ ಬರ್ಗರ್ ಮತ್ತು ಜೋಫ್ರಾ ಆರ್ಚರ್ ಪವರ್‌ಪ್ಲೇನಲ್ಲೇ ಸಿಎಸ್‌ಕೆ ತಂಡಕ್ಕೆ ಆಘಾತ ನೀಡಿದರು. ಸ್ಪಿನ್ ವಿಭಾಗದಲ್ಲಿ ರವೀಂದ್ರ ಜಡೇಜಾ ಅವರು ತಮ್ಮ ಹಳೆಯ ತಂಡವಾದ ಸಿಎಸ್‌ಕೆ ವಿರುದ್ಧ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು.

ನಾಂದ್ರೆ ಬರ್ಗರ್, ಜೋಫ್ರಾ ಆರ್ಚರ್, ರವೀಂದ್ರ ಜಡೇಜಾ ಅವರು ತಲಾ ಎರಡು ವಿಕೆಟ್‌ ಪಡೆದರೆ, ಬ್ರಿಜೇಶ್ ಶರ್ಮಾ, ಸಂದೀಪ್‌ ಶರ್ಮಾ, ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ ಪಡೆದು ಸಿಎಸ್‌ಕೆ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ಒಟ್ಟಿನಲ್ಲಿ ಹೇಳುವುದಾದರೆ ಈ ಪಂದ್ಯದಲ್ಲಿ ರಾಜಸ್ಥಾನ್‌ ತಂಡದ ಬೌಲಿಂಗ್, ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ಕಂಡುಬಂದಿತು. ಅದರಲ್ಲೂ, 128 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡಕ್ಕೆ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಅವರು ತಂಡದ ಸುಲಭ ಜಯಕ್ಕೆ ಅಡಿಪಾಯ ಹಾಕಿದರು.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮಿಯರ್, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ.

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಮ್ಯಾಥ್ಯೂ ಶಾರ್ಟ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಜೇಮೀ ಓವರ್ಟನ್, ನೂರ್ ಅಹ್ಮದ್, ಮ್ಯಾಟ್ ಹೆನ್ರಿ, ಅಂಶುಲ್ ಕಾಂಬೋಜ್, ಖಲೀಲ್ ಅಹ್ಮದ್.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/vaibhav-suryavanshi-hits-15-ball-fifty-for-rajasthan-royals-against-chennai-super-kings-in-ipl-2026-448903.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo