
Karnataka
oi-Shankrappa Parangi
ಬೆಂಗಳೂರು: ಭಾರತದ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು (Vande Bharat Express Train) ಕರ್ನಾಟಕದಲ್ಲೂ ಸೇವೆ ನೀಡುತ್ತಿವೆ. ದೇಶದ ಅನೇಕ ನಗರಗಳ ಮಧ್ಯ ವೇಗದ ಸಾರಿಗೆ ಸಂಪರ್ಕ ಕೊಂಡಿಯಾಗಿವೆ. ಈ ರೈಲು ಸಾರಿಗೆ ಸೇವೆ ಪ್ರಯಾಣಿಕರಲ್ಲಿ ತ್ವರಿತವಾಗಿ ಜನಪ್ರಿಯತೆ ಪಡೆದಿವೆ. ಇದೀಗ ಕರ್ನಾಟಕದ ವಂದೇ ಭಾರತ್ ಪ್ರಯಾಣಿಕರಿಗೆ ಮಹತ್ವದ ಅಪ್ಡೇಟ್ ನೀಡಲಾಗಿದೆ. ರಾಜ್ಯದ ನಾಲ್ಕು ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಹೊಸ ವೇಳಾಪಟ್ಟಿ ಅನ್ವಯ ಪ್ರಯಾಣ ಮಾಡಬೇಕಿದೆ.
ಪರಿಷ್ಕರಣೆ ಗೊಂಡ ನಾಲ್ಕು ವಂದೇ ಭಾರತ್ ರೈಲುಗಳು
1. ಕಾಚೆಗುಡ-ಯಶವಂತಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20703)
2. ಯಶವಂತಪುರ-ಕಾಚೆಗುಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20704)
3. ಕಲಬುರಗಿ- ಎಸ್ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22231)
4. ಎಸ್ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22232)

ರೈಲಿನ ಪರಿಷ್ಕೃತ ಸಮಯಗಳು ಹೀಗಿವೆ
ಕಾಚೆಗುಡ-ಯಶವಂತಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20703) ಸದ್ಯ ಮಧ್ಯಾಹ್ನ 3.55 ಕ್ಕೆ ಹಿಂದೂಪುರ ತಲುಪಲಿದೆ. ಮೊದಲು ಮಧ್ಯಾಹ್ನ 3.48 ಗಂಟೆಗೆ ತಲುಪುತ್ತಿತ್ತು.
ಅದೇ ರೀತಿ ಯಶವಂತಪುರ-ಕಾಚೆಗುಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20704) ಹಿಂದೂಪುರವನ್ನು ಮಧ್ಯಾಹ್ನ 12.08 ಕ್ಕೆ ತಲುಪುತ್ತಿತ್ತು. ಪರಿಷ್ಕೃತ ಸಮಯದಲ್ಲಿ ಈ ಎರಡನೇ ರೈಲು ಮಧ್ಯಾಹ್ನ 12.17 ಕ್ಕೆ ತಲುಪುತ್ತದೆ.
ಕಲಬುರಗಿ- ಎಸ್ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22231) ರೈಲು ಮಾರ್ಗದ ಎರಡು ನಿಲ್ದಾಣಗಳ ಆಗಮನದ ಸಮಯ ಬದಲಾಗಿದೆ. ರೈಲು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯವನ್ನು ಬೆಳಿಗ್ಗೆ 11.13 ಕ್ಕೆ ತಲುಪಲಿದೆ, ಈ ಮೊದಲು ಬೆಳಗ್ಗೆ 11.00 ನಿಲ್ದಾಣಕ್ಕೆ ಬರುತ್ತದೆ. ಇನ್ನೂ ಯಲಹಂಕ ನಿಲ್ದಾಣಕ್ಕೆ ಮಧ್ಯಾಹ್ನ 12.28ರ ಬದಲಾಗಿ, ಮಧ್ಯಾಹ್ನ 12.58ಕ್ಕೆ ಆಗಮಿಸಲಿದೆ.
ಎಸ್ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22232) ರೈಲು ಗುರುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯಾಚರಣೆ ಮಾಡಲಿದೆ. ಪರಿಷ್ಕೃತ ವೇಳಾಪಟ್ಟಿಗಳು ಪ್ರಮುಖ ನಿಲ್ದಾಣಗಳಲ್ಲಿ ಆಗಮಿಸಿ ತೆರಳುತ್ತದೆ.
ವಂದೇ ಭಾರತ್ ರೈಲಿನ ಕುರಿತು
ಪ್ರಯಾಣಿಕರಿಗೆ ಐಷಾರಾಮಿ ಮತ್ತು ಆರಾಮದಾಯಕ ಸೇವೆ, ಅನುಭವ ನೀಡುವ ರೈಲು ಇದಾಗಿದೆ. ಕರ್ನಾಟಕದಲ್ಲಿ ಒಟ್ಟು 12 ರೈಲುಗಳು ಸೇರಿ ಭಾರತಾದ್ಯಂತ ಒಟ್ಟು 164 ವಂದೇ ಭಾರತ್ ರೈಲುಗಳು ನಿತ್ಯ ಸಂಚಾರ ಸೇವೆ ನೀಡುತ್ತಿವೆ. ಅನುಕೂಲತೆ ಆಧಾರತದಲ್ಲಿ ಈ ರೈಲುಗಳ ಬೋಗಿ ಹೆಚ್ಚಳ, ಸಮಯ ಪರಿಷ್ಕರಣೆ ಮಾಡಲಾಗುತ್ತದೆ.
-

SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ
-

New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ
-

SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-

South Western Railway: ಹುಬ್ಬಳ್ಳಿಯಿಂದ ರಾಮೇಶ್ವರಂಗೆ ವಿಶೇಷ ರೈಲು ಸಂಚಾರ; ಮಾರ್ಚ್ 21ರಿಂದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ
-

ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ… Gold Price
-

Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 ‘ಗ್ಯಾಸ್ ಚಾರ್ಜ್’!: ಭಾರೀ ವೈರಲ್
-

Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ
-

IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ
-

ರಾಮಚಂದ್ರ ರಾವ್ ಪ್ರಕರಣ: ‘ಎಐ’ ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ
-

New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ
-

Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ
-

Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು
-

Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ
-

ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ… Karnataka Rain
-

March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/vande-bharat-express-revised-timings-for-bengaluru-kalaburagi-and-yesvantpur-kacheguda-trains-447883.html. xn--babytilbehr-pgb.com does not claim ownership of this content. All rights remain with the original publisher.
