
Entertainment
oi-Manohara M
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸ್ಥಾಪಕ ದಳಪತಿ ವಿಜಯ್-ಸಂಗೀತಾ ದಂಪತಿಯ ಡಿವೋರ್ಸ್ ವದಂತಿ ನಡುವೆ ಅಚ್ಚರಿ ಬೆಳವಣಿಗೆ ನಡೆದಿದೆ. ವಿಜಯ್ ನಟಿಯೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಪತ್ನಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣನ್ ಒಟ್ಟಿಗೆ ಕಾಣಿಸಿಕೊಂಡಿರುವುದು ಈ ವದಂತಿಗೆ ಪುಷ್ಟಿ ನೀಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಇಬ್ಬರ ಫೋಟೋ, ವಿಡಿಯೋಗಳು ವೈರಲ್ ಆಗಿವೆ.
ಒಂದೇ ಕಾರಿನಲ್ಲಿ ಬಂದ ತ್ರಿಶಾ
ಚೆನ್ನೈನಲ್ಲಿ ನಡೆದ ಎಜಿಎಸ್ ಫಿಲ್ಮ್ಸ್ ಮಾಲೀಕ ಕಲ್ಪತಿ ಸುರೇಶ್ ಅವರ ಪುತ್ರನ ವಿವಾಹ ಸಮಾರಂಭಕ್ಕೆ ವಿಜಯ್ ಹಾಗೂ ತ್ರಿಶಾ ಒಟ್ಟಾಗಿ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಜೋಡಿಯು ಒಂದೇ ಕಾರಿನಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೇದಿಕೆಯ ಮೇಲೆ ನವ ದಂಪತಿಗಳಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದ ವಿಜಯ್ ಮತ್ತು ತ್ರಿಶಾ ಅವರ ಆಪ್ತ ಒಡನಾಟವು ಅಭಿಮಾನಿಗಳಲ್ಲಿ ಅತೀವ ಕುತೂಹಲ ಮೂಡಿಸಿದೆ.

ಮದುವೆ ಸಮಾರಂಭಕ್ಕೆ ವಿಜಯ್ ಅವರು ಸಾಂಪ್ರದಾಯಿಕ ರೇಷ್ಮೆ ಶರ್ಟ್ ಮತ್ತು ರೇಷ್ಮೆ ಪಂಚೆಯಲ್ಲಿ ಕಂಗೊಳಿಸಿದರೆ, ತ್ರಿಶಾ ಅವರು ವಿಜಯ್ ಅವರ ಉಡುಗೆಗೆ ಹೊಂದಿಕೆಯಾಗುವ ಬಣ್ಣದ ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ. ಡಿವೋರ್ಸ್ ವದಂತಿ ನಡುವೆ ಇಬ್ಬರೂ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ. ಬೆಳ್ಳಿ ಪರದೆಯ ಮೇಲೆ ಅದ್ಭುತ ಕೆಮಿಸ್ಟ್ರಿ ಹೊಂದಿರುವ ಈ ಜೋಡಿ, ನಿಜ ಜೀವನದ ಸಮಾರಂಭದಲ್ಲೂ ಕೇಂದ್ರ ಬಿಂದುವಾಗಿದ್ದರು.
ಈ ಭೇಟಿಯು ವಿಜಯ್ ಅವರ ವೈಯಕ್ತಿಕ ಜೀವನದ ವಿವಾದಗಳ ನಡುವೆಯೇ ನಡೆದಿರುವುದು ವಿಶೇಷ. ಇತ್ತೀಚೆಗೆ ವಿಜಯ್ ಅವರ ಪತ್ನಿ ಸಂಗೀತ ಅವರು ನಟನ ವಿರುದ್ಧ ಕೆಲವು ವೈಯಕ್ತಿಕ ಆರೋಪಗಳನ್ನು ಮಾಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ವಿಜಯ್ ಅವರು ತ್ರಿಶಾ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಹಲವು ಹೊಸ ಊಹಾಪೋಹಗಳಿಗೆ ನಾಂದಿ ಹಾಡಿದೆ. ಈ ಹಿಂದೆಯೂ ಇವರ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿದ್ದು, ಈಗಿನ ವಿಡಿಯೋಗಳು ಆ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.
ದಳಪತಿ ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಕಳೆದ 26 ವರ್ಷಗಳಿಂದ ಸುದೀರ್ಘ ದಾಂಪತ್ಯ ನಡೆಸಿದ್ದ ವಿಜಯ್ ಮತ್ತು ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ವಿಜಯ್ ಅವರ ಪತ್ನಿ ಸಂಗೀತ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಅವರ ಮೇಲಿನ ನಂಬಿಕೆ ದ್ರೋಹದ ಆರೋಪವೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.
Thalapathy #Vijay & #Trisha from KalpathiSSuresh’s son wedding reception!! pic.twitter.com/U5vriaCCUl
— cinee worldd (@Cinee_Worldd) March 5, 2026
1999ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುದೀರ್ಘ ಕಾಲದ ಈ ಸಂಬಂಧ ಈಗ ಮುಕ್ತಾಯದ ಹಂತ ತಲುಪಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭವೊಂದಕ್ಕೆ ವಿಜಯ್ ಅವರು ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ಒಂದೇ ಕಾರಿನಲ್ಲಿ ಆಗಮಿಸಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಈ ವಿಚ್ಛೇದನದ ಸುದ್ದಿಯ ಬಗ್ಗೆ ವಿಜಯ್ ಆಗಲಿ ಅಥವಾ ಸಂಗೀತ ಆಗಲಿ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
250 ಕೋಟಿ ಜೀವನಾಂಶ
ಹಲವು ವರ್ಷಗಳಿಂದ ವಿಜಯ್ ಮತ್ತು ಸಂಗೀತ ತಮ್ಮ ವೈಯಕ್ತಿಕ ಜೀವನವನ್ನು ಅತ್ಯಂತ ಖಾಸಗಿಯಾಗಿ ಇರಿಸಿದ್ದರು. ಸಾರ್ವಜನಿಕವಾಗಿ ಕುಟುಂಬದ ವಿಷಯಗಳ ಬಗ್ಗೆ ಚರ್ಚಿಸುತ್ತಿರಲಿಲ್ಲ. ಆದರೆ, ಪ್ರಸ್ತುತ ಹರಿದಾಡುತ್ತಿರುವ ವಿಚ್ಛೇದನದ ವರದಿಗಳು ಇವರ ಸಂಬಂಧವನ್ನು ಸಾರ್ವಜನಿಕ ಚರ್ಚೆಗೆ ತಂದಿದೆ. ವಿಚ್ಛೇದನ ಪ್ರಕ್ರಿಯೆ ನಡೆದರೆ ವಿಜಯ್ ಅವರು ಸುಮಾರು 250 ಕೋಟಿ ರೂಪಾಯಿಗಳನ್ನು ಜೀವನಾಂಶವಾಗಿ ನೀಡಬಹುದು ಮತ್ತು ಮಕ್ಕಳ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ ಎಂದು ಹೇಳಲಾಗಿದೆ. ಒಂದು ವೇಳೆ ಇಬ್ಬರ ನಡುವೆ ರಾಜಿಯಾದರೆ ವಿಚ್ಛೇದನದ ಅರ್ಜಿಯನ್ನು ಕೈಬಿಡುವ ಸಾಧ್ಯತೆಯೂ ಇದೆ ಎಂದೂ ವರದಿಯಾಗಿದೆ.
ವಿಜಯ್ ಅವರು ಈಗಷ್ಟೇ ರಾಜಕೀಯಕ್ಕೆ ಪ್ರವೇಶಿಸಿ ತಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ಇಂತಹ ವೈಯಕ್ತಿಕ ವಿವಾದಗಳು ಅವರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿವೆ ಎಂಬುದು ಕುತೂಹಲ ಮೂಡಿಸಿದೆ.ವಿಜಯ್ ಮತ್ತು ತ್ರಿಶಾ ಅವರು ಈ ಹಿಂದೆ ಗಿಲ್ಲಿ, ತಿರುಪಾಚಿ, ಆತಿ, ಕುರುವಿ, ಲಿಯೋ ಮತ್ತು ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT) ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇನ್ನು ಸಿನಿಮಾದ ವಿಷಯಕ್ಕೆ ಬಂದರೆ, ವಿಜಯ್ ಅವರ ಮುಂದಿನ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಸಜ್ಜಾಗುತ್ತಿದೆ. ವರದಿಗಳ ಪ್ರಕಾರ, ಪ್ರಮಾಣೀಕರಣದ ಸಮಸ್ಯೆಗಳಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/thalapathy-vijay-spotted-with-actress-trisha-krishnan-amid-divorce-rumours-video-goes-viral-446239.html. xn--babytilbehr-pgb.com does not claim ownership of this content. All rights remain with the original publisher.
