Vijay Mallya: ವಿಜಯ್ ಮಲ್ಯ ಆರ್‌ಸಿಬಿಗೆ ಇಂಗ್ಲೀಷ್‌ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್‌ | Vijay Mallya’s Kannada Tweet for Royal Challengers Bengaluru Goes Viral Ahead of IPL 2026 Opener

Sports

oi-Madhusudhan KR

RCB Vijay Mallya: ಐಪಿಎಲ್‌ 19ನೇ ಸೀಸನ್‌ ಇಂದಿನಿಂದ (ಮಾರ್ಚ್ 28) ಆರಂಭವಾಗಲಿದೆ. ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಸನ್‌ ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮುನ್ನ ವಿಜಯ್ ಮಲ್ಯ ಅವರು ತಮ್ಮ ಟ್ವಿಟ್‌ನಲ್ಲಿ ಆರ್‌ಸಿಬಿಗೆ ವಿಶೇಷ ಸಂದೇಶದ ಮೂಲಕ ಶುಭ ಹಾರೈಸಿದ್ದಾರೆ. ಇದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಯುನೈಟೆಡ್ ಬ್ರೂವರೀಸ್ ಗ್ರೂಪ್‌ನ ಅಧ್ಯಕ್ಷ ವಿಜಯ್ ಮಲ್ಯ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಿಕ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡಕ್ಕೆ ಶುಭ ಹಾರೈಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕರಾದ ಇವರು, ಸಾಮಾಜಿಕ ಜಾಲತಾಣದ ಮೂಲಕ ತಂಡಕ್ಕೆ ವಿಶೇಷ ಸಂದೇಶವೊಂದನ್ನು ಕಳುಹಿಸಿದ್ದಾರೆ.

Vijay Mallya s Kannada Tweet for Royal Challengers Bengaluru Goes Viral Ahead of IPL 2026 Opener

ವಿಜಯ್ ಮಲ್ಯ ಟ್ವಿಟ್‌ನಲ್ಲಿ ಏನಿದೆ?

70 ವರ್ಷದ ವಿಜಯ್ ಮಲ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ, “ನಮ್ಮ ಬೆಂಗಳೂರಿನ ಸಿಂಹಗಳು ಕಾಯುತ್ತಿದ್ದ ದಿನ ಬಂದಿದೆ… ನಮ್ಮ ಸಿಂಹಗಳು.. ಐಪಿಎಲ್ ಚಾಂಪಿಯನ್ಸ್.. ಶುಭವಾಗಲಿ ಮತ್ತು ಧೈರ್ಯದಿಂದ ಆಟವಾಡಿ,” ಎಂದು ಇಂಗ್ಲೀಷ್‌ ಪದಗಳಲ್ಲಿ ಕನ್ನಡದ ಸಂದೇಶ ಕಳುಹಿಸಿದ್ದಾರೆ. ಇದು ಇದೀಗ ಎಲ್ಲಡೆ ವೈರಲ್‌ ಆಗುತ್ತಿದೆ.

‘ದಿ ಕಿಂಗ್ ಆಫ್ ಗುಡ್ ಟೈಮ್ಸ್’ ಖ್ಯಾತಿಯ ವಿಜಯ್ ಮಲ್ಯ ಅವರು ಹಣಕಾಸಿನ ಹಗರಣಗಳಲ್ಲಿ ಸಿಲುಕಿಕೊಂಡ ನಂತರ, ಅಮೃತ್ ಥಾಮಸ್ ತಂಡದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕೆಲವು ದಿನಗಳ ಹಿಂದೆಯಷ್ಟೇ, ಆದಿತ್ಯ ಬಿರ್ಲಾ ಗ್ರೂಪ್, ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲ್ಯಾಕ್‌ಸ್ಟೋನ್ ಸಂಸ್ಥೆಗಳು ಆರ್‌ಸಿಬಿ ತಂಡವನ್ನು ದಾಖಲೆಯ 1.78 ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸಿವೆ. ಇದು ಐಪಿಎಲ್ ಇತಿಹಾಸದಲ್ಲೇ ಫ್ರಾಂಚೈಸಿಯೊಂದಕ್ಕೆ ಲಭಿಸಿದ ಅತ್ಯಧಿಕ ಮೌಲ್ಯವಾಗಿದೆ. ಅಲ್ಲದೆ, ಇದು ಆರ್‌ಸಿಬಿಯ ಬ್ರ್ಯಾಂಡ್ ಮೌಲ್ಯ ಎಷ್ಟು ಪ್ರಬಲವಾಗಿದೆ ಎಂಬುದನ್ನು ಎತ್ತಿತೋರಿಸುತ್ತದೆ.

ಹೊಸ ಮಾಲೀಕರು ಡಿಯಾಜಿಯೊ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಪೂರ್ಣ 100% ಪಾಲನ್ನು ಖರೀದಿಸಲು ಅಂತಿಮ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಮಹಿಳಾ ಪ್ರೀಮಿಯರ್ ಲೀಗ್ ಎರಡೂ ಫ್ರಾಂಚೈಸಿಗಳನ್ನು ಒಳಗೊಂಡಿದೆ. ಈ ವ್ಯವಹಾರದ ಒಟ್ಟು ಮೌಲ್ಯವು 166.6 ಶತಕೋಟಿ ರೂಪಾಯಿಗಳು (ಸುಮಾರು 1.78 ಬಿಲಿಯನ್ ಯುಎಸ್ ಡಾಲರ್) ಎಂದು ಅಂದಾಜಿಸಲಾಗಿದೆ.

ವಿಜಯ್ ಮಲ್ಯ ಟ್ವಿಟ್‌ಗೆ ಬಂದಿರುವ ಪ್ರತಿಕ್ರಿಯೆಗಳು

“ಇಂದು ಬೆಂಗಳೂರಿನ ಪಾಲಿಗೆ ಒಂದು ಅದ್ಭುತ ರಾತ್ರಿ, ಏಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಆವೃತ್ತಿಯ ಮೊದಲ ಪಂದ್ಯ ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ, ಹಾಲಿ ಚಾಂಪಿಯನ್ ಆಗಿರುವ ನಮ್ಮ ಆರ್‌ಸಿಬಿ ತಂಡವು ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹಂಬಲದೊಂದಿಗೆ ಕಣಕ್ಕಿಳಿಯುತ್ತಿರುವುದರಿಂದ ಕ್ರೀಡಾಂಗಣದ ವಾತಾವರಣವು ಸಂಪೂರ್ಣ ರೋಮಾಂಚನಕಾರಿಯಾಗಿರಲಿದೆ,” ಎಂದು ವಿಜಯ್ ಮಲ್ಯ ಟ್ವಿಟ್‌ಗೆ ಮತ್ತೊಬ್ಬ ಬಳಕೆದಾರರು ಟ್ವಿಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು, “ಬೆಂಗಳೂರಿನ ಸಿಂಹಗಳು ಈ ಬಾರಿ ಆರಂಭದಿಂದಲೇ ಗರ್ಜಿಸಲಿವೆ. ಅದ್ಭುತ ಆಟ ಆಡಲಿದ್ದಾರೆ. ಆದರೆ ತಂಡದಲ್ಲಿ ಯಾರಿಗೂ ಕನ್ನಡ ಅರ್ಥವಾಗುವುದಿಲ್ಲ,” ಎಂದು ಬರೆದುಕೊಂಡಿದ್ದಾರೆ. ಇನ್ನೂ ಕಳೆದ ವರ್ಷ ಆರ್‌ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ, 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಿತು. ಈ ಬಾರಿಯೂ ಕೂಡ ಅದೇ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿದೆ. ಒಟ್ಟಿನಲ್ಲಿ ಇದೀಗ ಪಂದ್ಯ ಆರಂಭಕ್ಕೂ ಮುನ್ನ ವಿಜಯ್ ಮಲ್ಯ ಅವರು ಟ್ವಿಟ್‌ ಮೂಲಕ ಇಂಗ್ಲೀಷ್ ಪದಗಳಲ್ಲಿ ಕನ್ನಡ ಸಂದೇಶ ಕಳುಹಿಸಿರುವುದು ಇದೀಗ ಸಖತ್ ಸೌಂಡ್ ಮಾಡುತ್ತಿದ್ದು, ಈ ಟ್ವಿಟ್‌ಗೆ ಮೆಚ್ಚುಗೆಗಳ ಸುರಿಮಳೆ ಹರಿದುಬಂದಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/sports/vijay-mallya-s-kannada-tweet-for-royal-challengers-bengaluru-goes-viral-ahead-of-ipl-2026-opener-448649.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo