Viral News: ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿ ಬಿದ್ದ ಕಳ್ಳ, ಹೈದರಾಬಾದ್ ಟ್ರಾಫಿಕ್ ಪೊಲೀಸ್ ಟ್ರೋಲ್ | Hyderabad Viral News Twist Stolen Bike Thief Caught via Traffic Violation Police Trolled Online

India

oi-Hitesh Y

Hyderabad Viral News: ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದರಿಂದ ಸಿಕ್ಕಿಬಿದ್ದ ಘಟನೆ ನಡೆದಿದೆ. ಸಾಮಾನ್ಯವಾಗಿ ಕಳ್ಳರನ್ನು ಪೊಲೀಸರು ಹುಡುಕುವುದಕ್ಕೆ ಭಾರೀ ಸರ್ಕಸ್ ಮಾಡುವುದು/ ಬಲೆ ಬೀಸುವುದಕ್ಕೆ ವಿವಿಧ ಮಾರ್ಗಗಳನ್ನು ಅನುಸರಿಸುವುದು ಇದೆ. ಆದರೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಈ ವಿಷಯವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಹೈದರಾಬಾದ್ ಪೊಲೀಸರು ಈ ವಿಚಾರಕ್ಕೆ ಟ್ರೋಲ್‌ಗೂ ಗುರಿಯಾಗಿದ್ದಾರೆ.

ಹೈದರಾಬಾದ್‌ನಲ್ಲಿ 3 ತಿಂಗಳ ಹಿಂದೆ ಹಬೀಬ್ ನಗರ ಪ್ರದೇಶದಿಂದ ಫೈಸಲ್ ರೆಹಮಾನ್ ( Faisal Rahman @rahman0528) ಎನ್ನುವವರ ಬೈಕ್ ಕಳುವಾಗಿತ್ತು. ಅವರು ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಎಫ್‌ಐಆರ್ ದಾಖಲಿಸಿದರು, ಅವರು ಬೈಕ್ ಶೀಘ್ರದಲ್ಲೇ ಸಿಗಬಹುದು ಎಂದುಕೊಂಡಿದ್ದರು. ದಿನಗಳು ಕಳೆದವು.. ವಾರಗಳು ಯಾಕೆ ತಿಂಗಳುಗಳೇ ಕಳೆದವು ಆದರೆ, ಇಷ್ಟೆಲ್ಲ ನಡೆದರೂ ತಮ್ಮ ಬೈಕ್‌ನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ದಿನಗಳು ಕಳೆದಂತೆ ತಮ್ಮ ಬೈಕ್ ಮರಳಿ ಸಿಗಬಹುದು ಎನ್ನುವ ವಿಶ್ವಾಸವನ್ನೇ ಆ ವ್ಯಕ್ತಿ ಕಳೆದುಕೊಂಡಿದ್ದರು.

Hyderabad Viral News

ಅಲ್ಲದೆ ನಿಧಾನವಾಗಿ ಬೈಕ್ ಶಾಶ್ವತವಾಗಿ ಹೋಗಿರಬಹುದು ಎಂದು ಎನ್ನುವ ಮನಸ್ಥಿತಿಗೆ ತಲುಪಿದ್ದರು. ನಂತರ ಈಗ ಅನಿರೀಕ್ಷಿತವಾಗಿ ಘಟನೆಯೊಂದು ಸಂಭವಿಸಿದೆ. ಈ ಮೂಲಕ ಬೈಕ್‌ ಕಳ್ಳನ ಫೋಟೋ ಸಿಕ್ಕಿ ಬಿದಿದ್ದೆ. ಸಾಮಾನ್ಯವಾಗಿ ಕಳ್ಳ ಸಿಕ್ಕಿ ಬಿದ್ದರೆ, ಜನರು ಅಥವಾ ವಸ್ತುವನ್ನು ಕಳೆದುಕೊಂಡವರು ಪೊಲೀಸರನ್ನು ಪ್ರಶಂಸಿಸುತ್ತಾರೆ, ಇಲ್ಲವೇ ಥ್ಯಾಂಕ್ಸ್‌ ಹೇಳುತ್ತಾರೆ. ಆದರೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಪೊಲೀಸರು ಟ್ರೋಲ್‌ಗೆ ಗುರಿಯಾಗಿದ್ದಾರೆ.

ಬೈಕ್ ಕಳೆದುಕೊಂಡವರ ಮನೆಗೆ ಬಂತು Challan

ಇನ್ನು ಬೈಕ್ ಕಳೆದುಕೊಂಡಿದ್ದ ಫೈಸಲ್ ರೆಹಮಾನ್ ಅವರ ಮನೆಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದಾಗಿ ಪೊಲೀಸರಿಂದ ಚಲಾನ್ ಬಂದ ಮೇಲೆ, ಬೈಕ್ ಕದ್ದ ಕಳ್ಳನ ಫೋಟೋ ಸಿಕ್ಕಿದೆ. ಇದರೊಂದಿಗೆ ಹೈದರಾಬಾದ್‌ನ ಪೊಲೀಸರು ಹಾಗೂ ಸಂಚಾರ ಪೊಲೀಸರು ಟ್ರೋಲ್‌ಗೆ ಗುರಿಯಾಗುವಂತೆ ಆಗಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಯ ಚಲಾನ್ ಬಂದಿದ್ದು ನೋಡಿ ಬೈಕ್ ಮಾಲೀಕರು ಗೊಂದಲಕ್ಕೆ ಒಳಗಾಗಿದ್ದಾರೆ. 3 ತಿಂಗಳಿನಿಂದ ತನ್ನ ಬೈಕ್ ಅನ್ನು ನೋಡಿಲ್ಲ ಈ ರೀತಿ ಇರುವಾಗ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಲು ಹೇಗೆ ಸಾಧ್ಯ ಎನ್ನುವುದು ಅವರ ಪ್ರಶ್ನೆ. ಕುತೂಹಲದಿಂದ, ಅವರು ಚಲಾನ್ ವಿವರಗಳನ್ನು ತೆಗೆದು ನೋಡಿದಾಗ, ಕಳ್ಳನ / ಈಗ ಬೈಕ್‌ ಓಡಿಸುತ್ತಿರುವವರ ಫೋಟೋ ಸಿಕ್ಕಿದೆ. ಕದ್ದ ಬೈಕ್ ಅನ್ನು ಬಳಕೆ ಮಾಡಲಾಗುತ್ತಿದೆ ಎನ್ನುವುದು ಸಾಬೀತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಇನ್ನು ಈ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಯಾಗ್ ಎನ್ನುವವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಮೂಲತಃ, ಪೊಲೀಸರಿಗೆ ತಿಂಗಳುಗಳ ಕಾಲ ಕದ್ದ ಬೈಕನ್ನು ಕಂಡುಹಿಡಿಯಲಾಗಲಿಲ್ಲ. ಆದರೆ ಟ್ರಾಫಿಕ್ ಕ್ಯಾಮೆರಾ ಬೈಕ್ ಮತ್ತು ಕಳ್ಳ ಎರಡನ್ನೂ ಒಂದೇ ಕ್ಲಿಕ್‌ನಲ್ಲಿ ಸೆರೆಹಿಡಿಯಿತು ಎಂದು ವ್ಯಂಗ್ಯವಾಡಿದ್ದಾರೆ.

ಬೈಕ್ ಮಾಲೀಕ ಹೇಳಿದ್ದೇನು

ಪ್ರಿಯ ಹೈದರಾಬಾದ್ ಪೊಲೀಸರೇ ನನ್ನ ವಾಹನ 3 ತಿಂಗಳ ಹಿಂದೆ ಕಳುವಾಗಿತ್ತು ಮತ್ತು ಹಬೀಬ್ ನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ FIR ದಾಖಲಾಗಿದೆ. ಇಂದು, ಅದೇ ವಾಹನಕ್ಕೆ ನನಗೆ ಟ್ರಾಫಿಕ್ ಚಲಾನ್ ಬಂದಿದೆ ಮತ್ತು ಚಿತ್ರದಲ್ಲಿ ಕಳ್ಳನ ಮುಖ ಸ್ಪಷ್ಟವಾಗಿ ಗೋಚರಿಸುತ್ತಿದೆ. ದಯವಿಟ್ಟು ನೀವು ಇದರ ಬಗ್ಗೆ ಗಮನ ಹರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬೈಕ್ ಮಾಲೀಕ ಫೈಸಲ್ ರೆಹಮಾನ್ ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/hyderabad-viral-news-twist-stolen-bike-thief-caught-via-traffic-violation-police-trolled-online-449781.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo