
Karnataka
oi-Hitesh Y
ಬೆಳಗಾವಿ: ಕನ್ನಡದಲ್ಲಿ ವ್ಯವಹರಿಸಿ ಎಂದು ಬ್ಯಾಂಕ್ ಸಿಬ್ಬಂದಿಗೆ ಮನವಿ ಮಾಡಿದ ಗ್ರಾಹಕನ ಮೇಲೆಯೇ ಅವರು ಕೆಲಸ ಮಾಡುತ್ತಿದ್ದ ಕಂಪನಿಗೆ ದೂರು ನೀಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಲು ಮನವಿ ಮಾಡಿದ ಗ್ರಾಹಕರಿಗೆ ತೊಂದರೆ ಕೊಟ್ಟಿದ್ದಾರೆ ಎನ್ನಲಾಗಿದೆ. Belagavi – ಬೆಳಗಾವಿ ಎನ್ನುವ ಖಾತೆಯಿಂದ ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಕರ್ನಾಟಕದ ಬ್ಯಾಂಕ್ಗಳಲ್ಲಿ ಅಲ್ಲಿನ ಸಿಬ್ಬಂದಿ ಹಾಗೂ ಮ್ಯಾನೇಜರ್ಗಳು ಹಿಂದಿ ಸೇರಿದಂತೆ ಅನ್ಯಭಾಷೆಯಲ್ಲಿ ಮಾತನಾಡುತ್ತಿರುವ ವಿಡಿಯೋಗಳು ವೈರಲ್ ಆಗಿರುವುದು ಇದೆ. ಆದರೆ ಬ್ಯಾಂಕ್ನ ಸಿಬ್ಬಂದಿ ಗ್ರಾಹಕರ ಕಂಪನಿಗೆ ದೂರು ನೀಡುವುದು ಎಲ್ಲಿಯಾದರೂ ಕೇಳಿದ್ದಿರಾ ? ಅಂತಹ ಒಂದು ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇದಕ್ಕೆ ಕನ್ನಡಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಘಟನೆಯ ಹಿನ್ನೆಲೆ ಏನು
ಕನ್ನಡಿಗ ಅನಿಲ್ ದಡ್ಡಿಮನಿ ಅವರು ಬೆಳಗಾವಿಯ ಉದ್ಯಮಬಾಗಿನ ಬ್ಯಾಂಕ್ ಆಫ್ ಬರೋಡಾಗೆ ಭೇಟಿ ನೀಡಿದ್ದು, ಬ್ಯಾಂಕ್ನ ಸಿಬ್ಬಂದಿಗೆ ಕನ್ನಡದಲ್ಲಿ ವ್ಯವಹರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಅಲ್ಲಿಯ ಸಿಬ್ಬಂದಿ ಕನ್ನಡದಲ್ಲಿ ಮಾತನಾಡಿಲ್ಲ. ಕನ್ನಡದಲ್ಲಿ ಸೇವೆ ಕೊಡುವಂತೆ ಅನಿಲ್ ದಡ್ಡಿಮನಿ ಅವರು ಕೇಳಿಕೊಂಡಿದ್ದಾರೆ. ಆದರೆ, ಈ ಬ್ಯಾಂಕಿನ ಸಿಬ್ಬಂದಿ ಅನಿಲ್ ದಡ್ಡಿಮನಿ ಅವರು ಕೆಲಸ ಮಾಡುವ ಕಂಪನಿಗೆ ಕರೆ ಮಾಡಿದ್ದ ಬ್ಯಾಂಕ್ ಸಿಬ್ಬಂದಿ ಅವರ ಬಗ್ಗೆ ಆರೋಪ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ಆ ಕಂಪನಿಯ ಎಚ್ಆರ್ ಅನಿಲ್ ದಡ್ಡಿಮನಿ ಅವರಿಗೆ ಕರೆ ಮಾಡಿ, ವಿಚಾರಿಸಿದ್ದಾರೆ. ಇದರಿಂದ ಅನಿಲ್ ದಡ್ಡಿಮನಿ ಅವರಿಗೆ ಉದ್ಯೋಗದಲ್ಲೂ ಸಂಕಷ್ಟ ಎದುರಾಗಿದೆ. ಈ ವಿಚಾರವಾಗಿ ಬ್ಯಾಂಕಿಗೆ ತೆರಳಿ ಅನಿಲ್ ದಡ್ಡಿಮನಿ ಅವರು ಪ್ರಶ್ನೆ ಮಾಡಿದ್ದಾರೆ. ಕನ್ನಡಪರ ಹೋರಾಟಗಾರರು ಬ್ಯಾಂಕಿಗೆ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಪೋಲೀಸರು, ಪರಿಸ್ಥಿತಿಯನ್ನಾ ಶಾಂತಗೊಳಿಸಿದ್ದಾರೆ.
ಅಲ್ಲದೇ ಈ ಬ್ಯಾಂಕಿನ ಸಿಬ್ಬಂದಿ ಕನ್ನಡದಲ್ಲಿ ಗ್ರಾಹಕರಿಗೆ ಸೇವೆ ಕೊಡದೆ ಇರುವುದು ಮೊದಲನೇ ತಪ್ಪು, ಇದನ್ನಾ ಪ್ರಶ್ನೆ ಮಾಡಿದ ಅನಿಲ್ ದಡ್ಡಿಮನಿ ಅವರು ಕೆಲಸ ಮಾಡುವ ಕಂಪನಿಗೆ ಆರೋಪ ಮಾಡಿದ್ದು ಎರಡನೇ ತಪ್ಪು. ಗ್ರಾಹಕನ ಜೊತೆಗೆ ಅನುಚಿತವಾಗಿ ವರ್ತನೆ ಮಾಡಿದ ಈ ಬ್ಯಾಂಕ್ ಸಿಬ್ಬಂದಿಯನ್ನಾ ಕೂಡಲೇ ಅಮಾನತ್ತು ಮಾಡಬೇಕು ಎಂದು ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ.
ಕ್ಷಮೆಯಾಚಿಸಿದ ಬ್ಯಾಂಕ್ ಸಿಬ್ಬಂದಿ
ಇನ್ನು ಈ ಬ್ಯಾಂಕ್ನ ಸಿಬ್ಬಂದಿಯು ಕನ್ನಡದಲ್ಲಿ ವ್ಯವಹರಿಸುವಂತೆ ಕೇಳಿದ ಗ್ರಾಹಕನ ಮೇಲೆಯೇ ಅವರು ಕೆಲಸ ಮಾಡುತ್ತಿದ್ದ ಕಂಪನಿಗೆ ದೂರು ನೀಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬ್ಯಾಂಕ್ನ ಸಿಬ್ಬಂದಿಯ ನಡೆಯನ್ನು ಕನ್ನಡಪರ ಹೋರಾಟಗಾರರು ವಿರೋಧಿಸಿದ್ದು, ಬೆಳಗಾವಿಯ ಉದ್ಯಮಬಾಗಿನ ಬ್ಯಾಂಕ್ ಆಫ್ ಬರೋಡಾದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದಾದ ಬೆನ್ನಲ್ಲೇ ಬ್ಯಾಂಕ್ನ ಸಿಬ್ಬಂದಿ ಕನ್ನಡಿಗರ ಕ್ಷಮೆಯಾಚನೆ ಮಾಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/viral-video-belgaum-allegations-surface-against-bank-of-baroda-staff-over-refusal-to-provide-servic-443239.html. xn--babytilbehr-pgb.com does not claim ownership of this content. All rights remain with the original publisher.
