
Sports
oi-Hitesh Y
Viral Video: ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League)ನಲ್ಲಿ ವಿವಿಧ ತಂಡಗಳ ನಡುವೆ ನಡೆಯುವ ಪಂದ್ಯಗಳು ಮಾತ್ರವಲ್ಲ. ಅಲ್ಲಿ ನಡೆಯುವ ಕೆಲವೊಂದು ವಿಷಯಗಳು ಸಹ ಭಾರೀ ಟ್ರೆಂಡ್ ಸೃಷ್ಟಿ ಮಾಡುವುದು ಇದೆ. ಮೈದಾನದಲ್ಲಿ ನಡೆಯುವ ಸಣ್ಣ ಘಟನೆಗಳು ಸಹ ವೈರಲ್ ಆಗಿ ಜನರ ಗಮನ ಸೆಳೆಯುತ್ತದೆ. ಇದೀಗ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ (ಎಂಐ) vs ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2026 ಪಂದ್ಯದಲ್ಲಿ ಪ್ರೇಮಿಗಳ ವಿಡಿಯೋವೊಂದು ವೈರಲ್ ಆಗುತ್ತಿದೆ.
ಪ್ರೇಮಿಯೊಬ್ಬರಿಗೆ ಈ ಪಂದ್ಯದಲ್ಲಿ ಪ್ರಥಮ ಚುಂಬನ ದಂತ ಭಗ್ನ ಎನ್ನುವ ಅನುಭವವಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹುಡುಗನೊಬ್ಬ ತನ್ನ ಪ್ರೇಮವನ್ನು ನಿವೇದನೆ (Proposal) ಮಾಡುವಾಗ ರಿಂಗ್ ಮಿಸ್ ಆಗಿದೆ. ಮೈದಾನದಲ್ಲಿ ಲಕ್ಷಾಂತರ ಜನರ ಮುಂದೆ ಸುಂದರ ಕ್ಷಣಗಳನ್ನು ಕ್ರಿಯೇಟ್ ಮಾಡಬೇಕು ಎನ್ನುವ ನಿರೀಕ್ಷೆಯಲ್ಲಿದ್ದ ಪ್ರೇಮಿಗೆ ಸಣ್ಣ ಶಾಕ್ ಎದುರಾಗಿತ್ತು. ಆ ಮೇಲೆ ಏನಾಯ್ತು ಎನ್ನುವುದೇ ಸೊಗಸಾಗಿದೆ. ಅದರ ವಿವರ ಈ ಲೇಖನದಲ್ಲಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ (ಎಂಐ) vs ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2026 ಪಂದ್ಯ ಹಲವು ಕಾರಣಗಳಿಗೆ ವಿಶೇಷವಾಗಿತ್ತು. ಈ ಪಂದ್ಯದ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಯೊಬ್ಬರು ಕೆಕೆಆರ್ ಜೆರ್ಸಿ ಧರಿಸಿದ್ದ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾರೆ. ಆದಾಗ್ಯೂ ಅವರು ಖುಷಿ ಖುಷಿಯಿಂದ ರಿಂಗ್ ಬಾಕ್ಸ್ ತೆಗೆದು ಆ ರಿಂಗ್ ಅನ್ನು ಹುಡುಗಿಗೆ ಹಾಕುವಾಗಲೇ ರಿಂಗ್ ಕೆಳಗೆ ಬಿದ್ದಿದೆ, ಬಿದ್ದ ರಿಂಗ್ ಹುಡುಕುವುದಕ್ಕೆ ಈ ಪಂದ್ಯ ವೀಕ್ಷಣೆಗೆ ಬಂದಿದ್ದವರು ಸಹಾಯ ಮಾಡಿದ್ದಾರೆ. ಕೊನೆಗೂ ಹುಡುಗ ತಮ್ಮ ಪ್ರೇಯಸಿಗೆ ರಿಂಗ್ ತೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರೇಮ ನಿವೇದನೆಯು ಪಂದ್ಯ ವೀಕ್ಷಣೆಯಷ್ಟೇ ರೋಚಕವಾಗಿತ್ತು ಬಿಡಿ ಅಂತಿದ್ದಾರೆ.
ವೈರಲ್ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು
ಇನ್ನು ಈ ವೈರಲ್ ವಿಡಿಯೋಗೆ ನೆಟ್ಟಿಗರಿಂದಲೂ ಮಜವಾದ ರಿಪ್ಲೈಗಳನ್ನೇ ಮಾಡಿದ್ದಾರೆ. ಐಪಿಎಲ್‌ನ ಚಮತ್ಕಾರವು ಭಾರತೀಯ ತಂಡವನ್ನೇ ಮೀರಿಸುತ್ತದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮುಂಬೈ ಮೈದಾನದ ಒಳಗೆ ಮತ್ತು ಹೊರಗೆ ಗೆಲ್ಲುತ್ತಿದೆ ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.
Shei Prothom Bhalobashar feeling 💜 pic.twitter.com/AtiWuB863m
— KolkataKnightRiders (@KKRiders) March 30, 2026
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/viral-video-love-accepted-ring-dropped-funny-moment-at-mi-match-goes-viral-448973.html. xn--babytilbehr-pgb.com does not claim ownership of this content. All rights remain with the original publisher.
