War Update: ಹಾರ್ಮುಜ್ ಕೊಲ್ಲಿಯಲ್ಲಿ ಹಡಗುಗಳ ಮೇಲೆ ದಾಳಿ: ಥಾಯ್ಲೆಂಡ್ ನೌಕೆ ಧ್ವಂಸ, ಇಂದಿನ ಪ್ರಮುಖಾಂಶಗಳು | Iran Supreme Leader Injured in US-Israel Strikes; 400M Barrels of Oil Released Amid Global Crisis

International

oi-Shankrappa Parangi

ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಜಂಟಿಯಾಗಿ ನಡೆಸುತ್ತಿರುವ ದಾಳಿಗಳು, ಅದಕ್ಕೆ ಇರಾನಿನ ಪ್ರತಿದಾಳಿಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿವೆ. ಥಾಯ್ಲೆಂಡ್ ಹಡಗಿನ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಒಟ್ಟು ತೈಲ ಸರಬರಾಜಿನ ಪೈಕಿ ಶೇ. 20ರಷ್ಟನ್ನು ಹಾರ್ಮುಜ್ ಜಲಸಂಧಿಯಲ್ಲಿ ಮೂಲಕ ಸಾಗಿಸಲಾಗುತ್ತಿದೆ. ಈ ಮಾರ್ಗ ನಿರ್ಬಂಧಿಸಿದ ಮತ್ತು ಯುಎಸ್ ಮಾತು ಕೇಳದ ಇರಾನ್ ಮೇಲೆ ನಿರಂತರ ವೈಮಾನಿಕ ದಾಳಿ ಮುಂದುವರಿದಿದೆ. ಈ ಕೊಲ್ಲಿಯ ನೀರಿನಾಳದ ಬಾಂಬ್ ಅಳವಡಿಸಿದ್ದರ ಬಗ್ಗೆ ವರದಿ ಆಗಿದೆ. ಮಾರ್ಚ್‌ 11ರ ದಾಳಿಯಲ್ಲಿ ಇರಾನ್ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ. ಇಂದಿನ ಯುದ್ಧದ ಪ್ರಮುಖಾಂಶಗಳು ಇಲ್ಲಿವೆ.

ಯುದ್ಧದ ಇಂದಿನ ಪ್ರಮುಖಾಂಶಗಳು ಹೀಗಿವೆ

* ಥಾಯ್ಲೆಂಡ್ ಧ್ವಜ ಹೊತ್ತ ಬೃಹತ್ ಥಾಯ್ ಸರಕು ಸಾಗಣೆ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ಸ್ಪೋಟಕಗಳಿಂದ ಡಿಕ್ಕಿ ಹೊಡೆಸಲಾಗಿದೆ. ಈ ದಾಳಿಯಿಂದ ಎಂಜಿನ್ ಕೋಣೆಯಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಡಿದೆ. ಈ ಘಟನೆಯಿಂದ ಯುಎಸ್‌ ಕೆರಳಿ ಕೆಂಡವಾಗಿದೆ. ಕೂಡಲೇ ದಾಳಿಗೆ ಒಳಗಾದ ನೌಕೆ ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು. ಒಮಾನಿ ನೌಕಾಪಡೆಯು 20 ನಾವಿಕರನ್ನು ರಕ್ಷಿಸಿದ್ದು, ಮೂವರು ಕಾಣೆಯಾಗಿದ್ದಾರೆ.

Iran

* ಹಾರ್ಮುಜ್ ಜಲಸಂಧಿಯಲ್ಲಿ ಜಾಗತಿಕ ತೈಲ ರಫ್ತುಗಳನ್ನು ನಿರ್ಬಂಧಿಸಲು ಇರಾನ್ ಗಣಿ ಹಡಗುಗಳನ್ನು ನಿಯೋಜಿಸಲು ಪ್ರಾರಂಭಿಸಿದೆ. ಯುಎಸ್ ಮಿಲಿಟರಿ ಪಡೆ ದಾಳಿ ನಡೆಸಿ ಇರಾನಿನ 16 ಹಡಗುಗಳನ್ನು ಧ್ವಂಸ ಮಾಡಿದೆ. ಈ ಹಡಗಿನಲ್ಲಿ ಸಾಕಷ್ಟು ತೈಲವಿತ್ತು ಎಂದು ವರದಿ ಅಗಿದೆ. ಇಂತಹ ಘಟನೆ, ದಾಳಿಗಳು ಹೆಚ್ಚಾದರೆ ತೈಲ ಅಭಾವ ಮತ್ತಷ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ.

* “ಆಪರೇಷನ್ ಎಪಿಕ್ ಫ್ಯೂರಿ” ಹೆಸರಿನಲ್ಲಿ ಆರಂಭವಾದ ದಾಳಿ ಬಳಿಕ ಇರಾನ್ ದೇಶದಲ್ಲಿ ಸುಮಾರು 5,500 ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಿದ್ದೇವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ದೃಢಪಡಿಸಿದೆ. ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಉತ್ಪಾದನೆ ಮತ್ತು ವಿದ್ಯುತ್ ಪ್ರಕ್ಷೇಪಣ ಸಾಮರ್ಥ್ಯಗಳನ್ನು ಕೆಡವಲು ಮಂಗಳವಾರದಿಂದ (ಮಾ.10) ಯುಎಸ್ ದಾಳಿ ನಡೆಸುತ್ತಿದೆ.

* ಯುಎಸ್‌-ಇಸ್ರೇಲ್‌ ದಾಳಿಗೆ ಬಗ್ಗ ಇರಾನ್ ದೇಶವು ನೆರೆಯ ರಾಷ್ಟ್ರಗಳ ವಿರುದ್ಧ ಪ್ರತೀಕಾರವಾಗಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರಿಸಿದೆ. ಪ್ರಿನ್ಸ್ ಸುಲ್ತಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಸೌದಿ ಅರೇಬಿಯಾ ಏಳು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಒಂಬತ್ತು ಡ್ರೋನ್‌ಗಳನ್ನು ತಡೆದರೆ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಎರಡು ಡ್ರೋನ್ಗಳಿಂದ ದಾಳಿ ನಡೆಸಿದೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.

* ಇರಾನ್ ಇಸ್ರೇಲ್ ಯುದ್ಧ ಬಳಿಕ, ಪ್ರತೀಕಾರವೆಂಬಂತೆ ಇರಾನ್ ಹಾರ್ಮುಜ್ ಜಲಸಂಧಿಯ ತೈಲ ಮಾರ್ಗವನ್ನು ಬಂದ್ ಮಾಡಿತು. ಯಾವುದೇ ಹಡಗು ಈ ಮಾರ್ಗವಾಗಿ ಸಾಗಿದರೂ ದಾಳಿ ಮಾಡುವ ಎಚ್ಚರಿಕೆ ಕೊಟ್ಟಿತ್ತು. ಕೊಲ್ಲಿ ಮೇಲಿನ ನಿರ್ಬಂಧ ಮುಂದುವರಿದ ಬೆನ್ನಲ್ಲೆ ‘ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ)’ ಏರುತ್ತಿರುವ ಜಾಗತಿಕ ಬೆಲೆಗಳನ್ನು ಸ್ಥಿರಗೊಳಿಸಲು ನಿಕ್ಷೇಪಗಳಿಂದ 40 ಕೋಟಿ ಬ್ಯಾರೆಲ್ ಕಚ್ಚಾ ತೈಲವನ್ನು ದಾಖಲೆಯ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಒಪ್ಪಿದೆ.

* ಆಯತೊಲ್ಲಾ ಅಲಿ ಖಮೇನಿ ನಿಧನ ಬಳಿಕ ಇರಾನ್‌ನ ಹೊಸದಾಗಿ ನೇಮಕಗೊಂಡ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಬುಧವಾರ (ಮಾ.11) ರಂದು ನಡೆದ ವೈಮಾನಿಕ ದಾಳಿಗಳಲ್ಲಿ ಗಾಯಗೊಂಡಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಅವರು ಸದೃಢವಾಗಿದ್ದಾರೆ ಯಾವುದೇ ತೊಂದರೆ ಇಲ್ಲ ಎಂದು ಇರಾನ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

* ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಆರ್ಥಿಕ ಕೇಂದ್ರಗಳು, ಪ್ರಾದೇಶಿಕ ಬ್ಯಾಂಕ್‌ಗಳು ಮತ್ತು ಪ್ರಮುಖ ಮೈಕ್ರೋಸಾಫ್ಟ್‌, ಗೂಗಲ್ ಸೇರಿ ಇನ್ನಿತರ ಯುಎಸ್‌ ತಂತ್ರಜ್ಞಾನ ಸಂಸ್ಥೆಗಳನ್ನು ಗುರಿ ಮಾಡಿಕೊಂಡು ದಾಳಿ ಎಚ್ಚರಿಕೆ ನೀಡಿದೆ. ಇಲ್ಲಿರುವ ಯುಎಸ್‌ ಅಥವಾ ಇಸ್ರೇಲ್‌ಗೆ ಸೇರಿದ ಸಿಬ್ಬಂದಿ, ನಾಗರಿಕರು ಹಣಕಾಸು ಸಂಸ್ಥೆಗಳಿಂದ ಕನಿಷ್ಠ 1,000 ಮೀಟರ್ ದೂರದಲ್ಲಿರುವಂತೆ ಸೂಚಿಸಿದೆ. ಇಂದು ಬುಧವಾರ ರಾತ್ರಿ ಈ ಪ್ರದೇಶಗಳ ಮೇಲೆ ದಾಳೆ ನಡೆಯುವ ಸಾಧ್ಯತೆ ಇದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/iran-supreme-leader-injured-in-us-israel-strikes-400m-barrels-of-oil-released-amid-global-crisis-446757.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo