
International
oi-Shankrappa Parangi
ನವದೆಹಲಿ: ದೇಶ ಹಾಗೂ ವಿಶ್ವದಾದ್ಯಂತ ಕ್ಷಣ ಕ್ಷಣದ ಮಾಹಿತಿ ನೀಡುವ ಸಾಮಾಜಿಕ ಜಾಲತಾಣವಾದ ಎಕ್ಸ್ (ಈ ಹಿಂದೆ ಟ್ವಿಟ್ಟರ್) ಸೋಮವಾರ (ಫೆಬ್ರವರಿ 16) ದಿಢೀರ್ ಸ್ಥಗಿತವಾಯಿತು. ಇದರಿಂದ ಅಸಂಖ್ಯಾತ ಬಳಕೆದಾರರು ತೀವ್ರ ತೊಂದರೆ ಅನುಭವಿಸಿದರು. ಈ ಆಪ್ ಪ್ರವೇಶಿಸಲು, ಲಾಗಿನ್ ಆಗಲು, ಫೀಡ್ ಮಾಡಲು, ಪೋಸ್ಟ್‌ಗಳ ಪರಿಶೀಲನೆ ಸೇರಿದಂತೆ ಎಲ್ಲ ವಿಧದ ಸೇವೆ ಬಂದ್ ಆಗಿದ್ದರ ಬಗ್ಗೆ ವರದಿ ಆಗಿದೆ.
ಡೌನ್ ಡಿಟೆಕ್ಟರ್ ಮಾಡಿರುವ ವರದಿ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ಹಲವಾರು ಪ್ರದೇಶಗಳು ಎಕ್ಸ್ ಬಳಕೆ ಸ್ಥಗಿತವು ತೀವ್ರ ಪರಿಣಾಮ ಉಂಟು ಮಾಡಿತು. ಜಗತ್ತಿನ ಹಲವೆಡೆ ಕೋಟ್ಯಾಂತರ ಬಳಕೆದಾರರು ಎಕ್ಸ್ ಪ್ಲಾಟ್‌ಫಾರ್ಮ್ ಪ್ರವೇಶಿಸಲು ಆಗಲಿಲ್ಲ. ಈ ಸಮಸ್ಯೆ ಬಗ್ಗೆ ನೆಟ್ಟಿಗರು ವರದಿ ಮಾಡಿದ್ದಾರೆ. ಟ್ವೀಟ್ ಪೋಸ್ಟ್ ಮಾಡುವುದು, ಟೈಮ್‌ಲೈನ್‌ಗಳು ರಿಫ್ರೆಶ್ ಆಗದಿರುವುದು ಸೇರಿದಂತೆ ಸಾಕಷ್ಟು ತೊಂದರೆಗಳು ಎದುರಾದವು.

ಇಂದು ಮಧ್ಯಾಹ್ನ 1 ಗಂಟೆ ಹೊತ್ತಿಗೆ ಎಕ್ಸ್ ಸೇವೆ ಸ್ಥಗಿತಗೊಂಡಿದ್ದರ ಕುರಿತು ಸುಮಾರು 25,000ಕ್ಕೂ ಹೆಚ್ಚಿನ ದೂರುಗಳು ಕೇಳಿ ಬಂದವು. ಈ ಸ್ಥಗಿತವು ಇಂಟರ್‌ನೆಟ್ ಸೇವಾ ಅಡಚಣೆ ಉಂಟು ಮಾಡಿದ ಪ್ರಮುಖ ಸಮಸ್ಯೆ ಆಗಿದೆ. ಈ ಹಿಂದೆ ಮಾರ್ಚ್ 2025 ರಲ್ಲಿ ಎಕ್ಸ್ ಈ ರೀತಿ ಸ್ಥಗಿತ ಸಮಸ್ಯೆ ಎದುರಾಗಿತ್ತು.
ಕ್ಲೌಡ್‌ಫೇರ್ ಹಾಗೂ ಮೈಕ್ರೋಸಾಫ್ಟ್‌ನ ಅಜ್ಯೂರ್ ಕೂಡ ಕಳೆದ ವರ್ಷ ಸಮಸ್ಯೆಯನ್ನು ಎದುರಿಸಿದ್ದವು. ಅಮೆಜಾನ್ ಎಡಬ್ಲ್ಯೂಎಸ್‌ನಲ್ಲಿನ ಅಡಚಣೆಯು ಸಾವಿರಾರು ವೆಬ್‌ಸೈಟ್‌ಗಳು ಮತ್ತು ಸ್ನ್ಯಾಪ್‌ಚಾಟ್ ಮತ್ತು ರೆಡ್ಡಿಟ್‌ನಂತಹ ಕೆಲವು ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಅಕ್ಟೋಬರ್‌ನಲ್ಲಿ ಜಾಗತಿಕವಾಗಿ ಸೇವೆಯಲ್ಲಿ ಅಚರಣೆ ಉಂಟಾಗಿತ್ತು. ಇದೀಗ 2026ರ ಫೆಬ್ರವರಿಯಲ್ಲಿ ಮತ್ತೆ ಎಕ್ಸ್ ಖಾತೆಗೆ ಪ್ರವೇಶ, ಪೋಸ್ಟ್ ಡೌನ್‌ಲೋಡ್, ಅಪ್ಲೋಡ್ ಸೇರಿ ವಿವಿಧ ಸೇವೆ ಸ್ಥಗಿತಗೊಂಡು ಸಮಸ್ಯೆ ಆಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/x-handle-is-down-globally-millions-of-users-hit-by-sudden-outage-in-india-and-usa-know-more-detail-443965.html. xn--babytilbehr-pgb.com does not claim ownership of this content. All rights remain with the original publisher.
