
Entertainment
oi-Manohara M
“ಕೆಜಿಎಫ್” ಹಾಗೂ “ಕೆಜಿಎಫ್-2” ಸಿನಿಮಾಗಾಗಿ ನಟ ಯಶ್ ಹಲವು ವರ್ಷಗಳ ಕಾಲ ಗಡ್ಡ ಬೆಳೆಸಿದ್ದರು. ಇದೇ ಲುಕ್ ಮೂಲಕ ದೇಶ-ವಿದೇಶಗಳಲ್ಲಿ ಸಂಚಲನ ಮೂಡಿಸಿದ್ದ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದಲ್ಲೂ ಗಡ್ಡದ ಪಾತ್ರವನ್ನೇ ಮುಂದುವರಿಸಿದ್ದರು. ಆದರೆ ಯಶ್ ಇದೀಗ ಅಭಿಮಾನಿಗಳಿಗೆ ಭಾರೀ ಅಚ್ಚರಿ ನೀಡಿದ್ದಾರೆ. ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದಲ್ಲಿನ ಪಾತ್ರಕ್ಕಾಗಿ ಯಶ್ ತಮ್ಮ ವರ್ಷಗಳ ಗಡ್ಡವನ್ನು ಸಂಪೂರ್ಣವಾಗಿ ತೆಗೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೊಸ ಲುಕ್ ನೋಡಿ ಗೂಗ್ಲಿ ಯಶ್ ಮತ್ತೆ ಬಂದ್ರು ಎನ್ನುತ್ತಿದ್ದಾರೆ ಅಭಿಮಾನಿಗಳು.
ಎಐ ಫೋಟೋ ಎಂದವರಿಗೆ ವಿಡಿಯೋ ಉತ್ತರ!
ಇತ್ತೀಚೆಗೆ ‘ಟಾಕ್ಸಿಕ್’ ಚಿತ್ರತಂಡ ಯಶ್ ಅವರ ಗಡ್ಡವಿಲ್ಲದ ಸ್ಟೈಲಿಶ್ ಲುಕ್ ಅನ್ನು ಟೀಸರ್‌ನಲ್ಲಿ ರಿವೀಲ್ ಮಾಡಿತ್ತು. ಆದರೆ ಕೆಲ ನೆಟಿಜನ್‌ಗಳು ಇದು ನಿಜವಾದ ಲುಕ್ ಅಲ್ಲ, ಎಐ ಮೂಲಕ ಸೃಷ್ಟಿಸಿದ ಚಿತ್ರ ಎಂದು ಅಣಕಿಸಿದ್ದರು. ಇದೀಗ ಆ ಎಲ್ಲ ಟೀಕೆಗಳಿಗೆ ತಕ್ಕ ಉತ್ತರದಂತೆ ಗಡ್ಡ ತೆರವು ಮಾಡುತ್ತಿರುವ ರಿಯಲ್ ವಿಡಿಯೋ ಹೊರಬಿದ್ದಿದ್ದು, ಈ ಎಲ್ಲ ಅನುಮಾನಗಳಿಗೆ ತೆರೆ ಬಿದ್ದಿದೆ. ವಿಡಿಯೋದಲ್ಲಿ ಯಶ್ ಶಾಂತವಾಗಿ ಕುಳಿತುಕೊಂಡು ಗಡ್ಡ ಕತ್ತರಿಸಿಕೊಳ್ಳುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಯಶ್ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಮೂಡಿದೆ.

ಡಬಲ್ ರೋಲ್‌ನಲ್ಲಿ ಯಶ್
‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅವರು ‘ರಾಯ’ ಮತ್ತು ‘ಟಿಕೆಟ್’ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ‘ಟಿಕೆಟ್’ ಎಂಬ ಸ್ಟೈಲಿಶ್ ಹಾಗೂ ಯುವ ಪಾತ್ರಕ್ಕಾಗಿ ಯಶ್ ಗಡ್ಡವನ್ನು ತೆಗೆದು ಹೊಸ ಗೆಟಪ್‌ನಲ್ಲಿ ಮಿಂಚುತ್ತಿದ್ದಾರೆ. ಗಡ್ಡವಿಲ್ಲದ ಈ ಲುಕ್ ಅವರನ್ನು ಮತ್ತಷ್ಟು ಯಂಗ್ ಆಗಿ ತೋರಿಸುತ್ತಿದ್ದು, ಅಭಿಮಾನಿಗಳು “ಗೂಗ್ಲಿ ಲುಕ್‌ಗೆ ಮರಳಿದ ಯಶ್” ಎಂದು ಸಂಭ್ರಮಿಸುತ್ತಿದ್ದಾರೆ.
ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಟಚ್
ಖ್ಯಾತ ಸೆಲೆಬ್ರಿಟಿ ಹೇರ್‌ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ (Alex Vijaykanth) ಅವರೇ ಯಶ್‌ಗೆ ಈ ಹೊಸ ಲುಕ್ ನೀಡಿದ್ದು, ಸಂಪೂರ್ಣ ಟ್ರಾನ್ಸ್‌ಫರ್ಮೇಶನ್ ವಿಡಿಯೋ ಈಗ ವೈರಲ್ ಆಗಿದೆ. ಹಲವು ವರ್ಷಗಳ ಕಾಲ ಗಡ್ಡ ಬೆಳೆಸಿದ್ದ ಯಶ್ ಅವರ ಈ ಬದಲಾವಣೆ ಚಿತ್ರರಂಗದಲ್ಲೇ ಚರ್ಚೆಗೆ ಗ್ರಾಸವಾಗಿದೆ. ‘ಟಾಕ್ಸಿಕ್’ ಸಿನಿಮಾ ಈಗಾಗಲೇ ದೇಶವ್ಯಾಪಿ ಭಾರೀ ಕುತೂಹಲ ಮೂಡಿಸಿದ್ದು, ಯಶ್ ಅವರ ಹೊಸ ಅವತಾರ ಚಿತ್ರದ ಮೇಲೆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಗಡ್ಡದ ರಾಕಿ ಭಾಯ್ ಇಮೇಜ್‌ನಿಂದ ಹೊರಬಂದು, ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್ ಈ ಬಾರಿ ಮತ್ತೊಂದು ಸಂಚಲನ ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಸಿನಿಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ ಸರಣಿ ಬಳಿಕ ಯಶ್ ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಗಡ್ಡದ ಲುಕ್‌ನಲ್ಲೇ ಕಾಣಿಸಿಕೊಂಡಿದ್ದರು. ಆ ಇಮೇಜ್ ಅವರ ವ್ಯಕ್ತಿತ್ವದ ಭಾಗವಾಗಿತ್ತು. ಇದೀಗ ಆ ಲುಕ್‌ಗೆ ವಿದಾಯ ಹೇಳಿರುವುದು ಒಂದು ಹೊಸ ಅಧ್ಯಾಯದ ಆರಂಭವೆಂದು ಅಭಿಮಾನಿಗಳು ಹೇಳುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಈಗಾಗಲೇ ದೇಶಮಟ್ಟದಲ್ಲಿ ಕುತೂಹಲ ಹುಟ್ಟಿಸಿದ್ದು, ಯಶ್ ಅವರ ಈ ಬದಲಾವಣೆ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಮತ್ತಷ್ಟು ಗರಿಗೆದರಿಸಿದೆ.
ವಿಭಿನ್ನ ಕಥಾಹಂದರ ಮತ್ತು ಸ್ಟೈಲಿಷ್ ಲುಕ್‌ನೊಂದಿಗೆ ಈ ಸಿನಿಮಾ ಮತ್ತೊಮ್ಮೆ ಯಶ್‌ಗೆ ಪ್ಯಾನ್ ಇಂಡಿಯಾ ಮಟ್ಟದ ಸಂಚಲನ ತಂದುಕೊಡಬಹುದೆಂಬ ಮಾತು ಕೇಳಿಬರುತ್ತಿದೆ. ಗಡ್ಡ ತೆಗೆದ ಯಶ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದು, ಟೀಕಾಕಾರರಿಗೆ ಸ್ಪಷ್ಟ ಉತ್ತರ ನೀಡಿದಂತಾಗಿದೆ. ಅಭಿಮಾನಿಗಳು ಇದೀಗ ‘ಟಾಕ್ಸಿಕ್’ ಚಿತ್ರದ ಮುಂದಿನ ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
-

ಕೆಜಿಎಫ್-2 ಲೋಕಲ್ ಸಿನಿಮಾ, ಟಾಕ್ಸಿಕ್ ಪ್ರೇಕ್ಷಕರ ಮೂರ್ಖತನಕ್ಕೆ ಸಾಕ್ಷಿ: ಧುರಂಧರ್ ಹಾಡಿ ಹೊಗಳಿದ ರಾಮ್ ಗೋಪಾಲ್ ವರ್ಮ
-

Darshan Help: ದರ್ಶನ್ಗೆ ಇದೆಲ್ಲ ಬೇಕಾಗಿರಲಿಲ್ಲ, ಅವ್ರು ಪಟ್ಟ ಕಷ್ಟ ಕಡಿಮೆಯೇನಲ್ಲ: ಖಳನಟ ಕಿಲ್ಲರ್ ವೆಂಕಟೇಶ್
-

“ಜೈ ಹನುಮಾನ್” ಟೀಂ ಸೇರಿಕೊಂಡ ರಿಷಬ್ ಶೆಟ್ಟಿ: ಅಂಜನಾದ್ರಿ ಬೆಟ್ಟದಲ್ಲಿ ಅದ್ಧೂರಿ ಮುಹೂರ್ತ
-

70th Filmfare Awards: ಶ್ರೀಮುರಳಿ ಅತ್ಯುತ್ತಮ ನಟ, ಕನ್ನಡ ಚಿತ್ರರಂಗದ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ
-

Vijayalakshmi Darshan: ಡಿಬಾಸ್ ಚೆನ್ನಾಗಿದ್ದಾರೆ, ನಿಮ್ಮೆಲ್ಲರಿಂದ ಧೈರ್ಯವಾಗಿದ್ದಾರೆ: ವಿಜಯಲಕ್ಷ್ಮಿ ದರ್ಶನ್
-

ಕೋವಿಡ್ ಲಸಿಕೆ ಸರ್ಕಾರಗಳ ಕೈ ಕಚ್ಚಲಾರಂಭಿಸಿದಂತಿದೆ: ರಾಜಾರಾಂ ತಲ್ಲೂರು ಬರಹ
-

Karnataka Rains: ಚಂಡಮಾರುತ ಪರಿಚಲನೆ ತೀವ್ರತೆ, ಒಳನಾಡು ಜಿಲ್ಲೆಗಳಲ್ಲಿ ಗುಡಗು ಸಹಿತ ಮಳೆ ಮುನ್ಸೂಚನೆ
-

ಯಶ್ ಜೊತೆ ಹಸಿಬಿಸಿ ದೃಶ್ಯದಲ್ಲಿ ಮತ್ತೊಬ್ಬ ನಟಿ: ಹೆಸರು ರಿವೀಲ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
-

New Railway Line: ಆಂಧ್ರ ಸಂಪರ್ಕಿಸುವ ತುಮಕೂರು-ರಾಯದುರ್ಗ ರೈಲು ಯೋಜನೆ, 83 ಕಿಮೀ ಕಾರ್ಯಾರಂಭ, ಅಪ್ಡೇಟ್
-

Today Horoscope Feb 21: ಈ ರಾಶಿಯವರಿಗೆ ಇಂದು ಹೊಸ ಜವಾಬ್ದಾರಿ, ಪರಿಶ್ರಮಕ್ಕೆ ಫಲ
-

Glenn Maxwell: ಹೈದರಾಬಾದ್ ತಂಡ ಸೇರಿದ ಆರ್ಸಿಬಿ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್: ಎಷ್ಟು ಕೋಟಿಗೆ ಗೊತ್ತಾ?
-

IND Vs PAK: ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವೆ ಮತ್ತೆ ಹೈವೋಲ್ಟೇಜ್ ಕದನ ಸಾಧ್ಯತೆ: ಇಲ್ಲಿದೆ ವರದಿ
-

Mahesh Babu: ಬೆಂಗಳೂರಿಗೆ ವಿಶೇಷ ಧನ್ಯವಾದ ಹೇಳಿದ ನಟ ಮಹೇಶ್ ಬಾಬು, ಕಾರಣ ಇಲ್ಲಿದೆ
-

ಬೆಂಗಳೂರು ಸಮೀಪದ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಟರ್ಮಿನಲ್ ನಿರ್ಮಾಣ: ವೆಚ್ಚ, ಪ್ರಯೋಜನಗಳ ವಿವರ ಇಲ್ಲಿದೆ
-

ಕರ್ನಾಟಕದ ಆರ್ಸಿಬಿ ಅಭಿಮಾನಿಗಳ ಕ್ರಶ್ ಲಾರೆನ್ ಬೆಲ್ ಇನ್ಸ್ಟಾಗ್ರಾಂ ಫಾಲೋವರ್ಸ್ ಗಣನೀಯ ಏರಿಕೆ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/yash-shaves-beard-for-toxic-movie-viral-transformation-video-breaks-the-internet-rocking-star-shocks-444781.html. xn--babytilbehr-pgb.com does not claim ownership of this content. All rights remain with the original publisher.
