Yash Toxic Teaser: ಯಶ್ ಟಾಕ್ಸಿಕ್ ಟೀಸರ್ ಬಿಡುಗಡೆ ದಿನಾಂಕ, ಸಮಯ ರಿವೀಲ್ | Yash ‘Toxic’ Teaser Set to Release on February 20, 2026 Announces Film Team: Know details

Entertainment

oi-Madhusudhan KR

Yash Toxic teaser: ರಾಕಿಂಗ್ ಸ್ಟಾರ್ ಯಶ್ ನಟನೆಯ ಹೊಸ ಸಿನಿಮಾ ಟಾಕ್ಸಿಕ್ ಟೀಸರ್ ಬಿಡುಗಡೆಗೆ ಕೌಂಟ್‌ಡೌನ್‌ ಆರಂಭವಾಗಿದೆ. ಚಿತ್ರತಂಡ ಫೆಬ್ರವರಿ 20ರ ಬೆಳಗ್ಗೆ 9:35ಕ್ಕೆ ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಿಸಿ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.

ಇತ್ತೀಚೆಗೆ ಟಾಕ್ಸಿಕ್ ಟ್ರೇಲರ್ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಸುದ್ದಿಯಾಗಿತ್ತು. ಆದರೆ, ಇದಕ್ಕೂ ಮೊದಲು ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿದ್ದು, ಇದರಿಂದ ಅಭಿಮಾನಿಗಳಿಗೆ ಸರ್‌ಪ್ರೈಸ್ ಸಿಕ್ಕಿದೆ. ಮೊದಲು ರಾಯ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆಯಾಗಿತ್ತು. ಇದರಲ್ಲಿ ಕೆಲವು ಬೋಲ್ಡ್ ದೃಶ್ಯಗಳು ಕೂಡ ಇದ್ದ ಕಾರಣ ಸಖತ್ ಸದ್ದು ಮಾಡುವುದಲ್ಲದೆ, ಈ ಬಗ್ಗೆ ಹಲವರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಇನ್ನೂ ಈ ಬಾರಿ ಹೊಸ ಟೀಸರ್‌ನಲ್ಲಿ ಯಾವುದೇ ಬೋಲ್ಡ್ ದೃಶ್ಯಗಳು ಇರುತ್ತವೆಯೇ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

Yash Toxic Teaser

ಭಾರೀ ಚರ್ಚೆ ಹುಟ್ಟುಹಾಕಿದ್ದ ಹಸಿಬಿಸಿ ದೃಶ್ಯಗಳು

ಇತ್ತೀಷೆಗಷ್ಟೇ ಬಿಡುಗಡೆಯಾಗಿದ್ದ ಟಾಕ್ಸಿಕ್‌ ಟೀಸರ್‌ನಲ್ಲಿ ಗುಂಡಿನ ಸದ್ದು, ಹಸಿಬಿಸಿ ದೃಶ್ಯ ದೃಶ್ಯಗಳು ಕಂಡುಬಂದಿದ್ದು, ಪರ-ವಿರೋಧ ಚರ್ಚೆಗಳು ಆಗಿದ್ದವು. ಇದೀಗ ಶುಕ್ರವಾರ ಮತ್ತೊಂದು ಟೀಸರ್ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ, ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಗಗಲೇ ಸಿನಿಮಾದಲ್ಲಿನ ಎಲ್ಲಾ ಪಾತ್ರಗಳನ್ನು ಚಿತ್ರತಂಡ ಪರಿಚಯಿಸಿತ್ತು. ಅಲ್ಲದೆ, ರಾಯ ಪಾತ್ರ ಪರಿಚಯಿಸುವ ಟೀಸರ್ ರಿಲೀಸ್ ಮಾಡಲಾಗಿತ್ತು.

ಇದೇ ಟೀಸರ್​​​ನಲ್ಲಿ ಹಸಿಬಿಸಿ ದೃಶ್ಯಗಳು ಇದ್ದವು. ಇದೇ ಕಾರಣದಿಂದ ಈ ಟೀಸರ್ ದೊಟ್ಟ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಟೀಸರ್ ಮೂಲಕ ಸಿನಿಮಾ ಪ್ರಚಾರಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗುತ್ತಿದೆ. ಆದರೆ, ರಿಲೀಸ್ ಆಗಿರುವ ಪೋಸ್ಟರ್​​ನಲ್ಲಿ ದಿನಾಂಕ ಹಾಗೂ ಸಮಯದ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/yash-toxic-teaser-set-to-release-on-february-20-2026-announces-film-team-know-details-444313.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo